ಗಣೇಶ ಮಂದಿರ ವಾರ್ಡ್ -165ರಲ್ಲಿ ಡಾ||ಮಾಸ್ಟರ್ ಹಿರಣ್ಣಯ್ಯ ರಸ್ತೆ ಮತ್ತು ಪ್ರೋ.ಸಿ.ಇ.ಜಿ ಜಸ್ಟೋ
ಗಣೇಶ ಮಂದಿರ ವಾರ್ಡ್ -165ರಲ್ಲಿ ಡಾ||ಮಾಸ್ಟರ್ ಹಿರಣ್ಣಯ್ಯ ರಸ್ತೆ ಮತ್ತು ಪ್ರೋ.ಸಿ.ಇ.ಜಿ ಜಸ್ಟೋ ರಸ್ತೆ ನಾಮಕರಣ ಸಮಾರಂಭ .ಉದ್ಘಾಟನೆಯನ್ನು ಕಂದಾಯ ಸಚಿವರಾದ ಆರ್.ಅಶೋಕ್ ರವರು ,ಗಣೇಶ ಮಂದಿರ ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಲಕ್ಷ್ಮೀ ಉಮೇಶ್ ಮತ್ತು ಶ್ರೀಮತಿ ಶಾಂತಮ್ಮ ಮಾಸ್ಟರ್ ಹಿರಣ್ಣಯ್ಯ ಮತ್ತು ಬಾಬು ಹಿರಣ್ಣಯ್ಯ ,ಬಿ.ಜೆ.ಪಿ.ಮುಖಂಡರಾದ ಉಮೇಶ್ ಕಬ್ಬಾಳ್ ರವರು ಉದ್ಘಾಟನೆ ಮಾಡಿದರು.
ಕಂದಾಯ ಸಚಿವರಾದ ಆರ್.ಅಶೋಕ್ ರವರು ಮಾತನಾಡಿ
ನಟ ,ರಂಗಭೂಮಿ ಕಲಾವಿದ ,ಮಾಸ್ಟರ್ ಹಿರಣ್ಣಯ್ಯ ರವರನ್ನು ನಟರತೃಕಾರ ಎಂಬ ಬಿರುದು ನೀಡಿದ್ದರು ಕರ್ನಾಟಕದ ಜನರು .ಸಮಾಜದ ಅಂಕುಡೊಂಕುಗಳನ್ನು ತಮ್ಮ ನೇರ ಮಾತುಗಳಿಂದ ಸಮಾಜದ ಬದಲಾವಣೆ ತರುವಲ್ಲಿ ಮಹತ್ವದ ಪಾತ್ರವಿತ್ತು.ರಾಜಕೀಯ ಶುದ್ದೀಕರಣ ಮಾಡಲು ಅವರ ನಾಟಕಗಳ ಮುಖಾಂತರ ರಾಜಕಾರಣಿಗಳಿಗೆ ಛಾಟಿ ಬೀಸುತ್ತಿದ್ದರು.
ಪ್ರೋ.ಜಸ್ಟೋರವರು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಅದ್ಬುತ ತಂತ್ರಜ್ಞರು ,ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು.ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಕನ್ನಡ ನಾಡಿಗೆ ಸೇವೆ ಸಲ್ಲಿಸಿದ ಮತ್ತು ನಮ್ಮ ಕ್ಷೇತ್ರದ ಮಹನೀಯರುಗಳನ್ನು ರಸ್ತೆಗಳಿಗೆ ನಾಮಕರಣ ಮಾಡುವುದರಿಂದ ಅವರ ಹೆಸರು ಅಜರಾಮರವಾಗಿ ಉಳಿಸಿ ,ಮುಂದಿನ ಪೀಳಿಗೆಗೆ ಅವರ ಇತಿಹಾಸ ತಿಳಿಯವಂತೆ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದರು.
ಶ್ರೀಮತಿ ಲಕ್ಷ್ಮೀ ಉಮೇಶ್ ರವರು ಮಾತನಾಡಿ ವೇಗವಾಗಿ ಬೆಳಯುತ್ತಿರುವ ನಗರ ಪ್ರದೇಶದಲ್ಲಿ ನಾಡಿಗೆ ಸೇವೆ ಸಲ್ಲಿಸಿದ ಮಹನೀಯಗಳನ್ನು ಮರೆಯುತ್ತಿದ್ದಾರೆ .ಅವರ ಸಲ್ಲಿಸಿದ ಸೇವೆ ಮುಂದಿನ ಸಮಾಜಕ್ಕೆ ತಿಳಿಯಬೇಕು .ಅವರ ಸೇವೆ ಸ್ಮರಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಶ್ರೀಮತಿ ಶಾಂತಮ್ಮ ಹಿರಣ್ಣಯ್ಯ ರವರಿಗೆ ಸಿ.ಎ.35ನೇRank ಪಡೆದ ಸೌಮ್ಯ ಮತ್ತು ಕೆ.ಎ.ಎಸ್.ಅಧಿಕಾರಿಣಿ ಸಂಜನಾರವರಿಗೆ ಸನ್ಮಾನಿಸಲಾಯಿತು.