ನಾಡಿನ ಸಮಸ್ತ ನಾಗರಿಕರಿಗೂ 71ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು.
ನಾಡಿನ ಸಮಸ್ತ ನಾಗರಿಕರಿಗೂ 71ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯ ಶುಭಾಶಯಗಳು.
ಧ್ವಜಾರೋಹಣ
ಜನವರಿ-26-2020 ಭಾನುವಾರ ಬೆಳಿಗ್ಗೆ 8.ಗಂಟೆಗೆ" ಬನಶಂಕರಿ ಬೃಂದಾವನ ಪಾರ್ಕ್ "( ಎಸ್ ಎಲ್ ವಿ ಮುಂಭಾಗ ) ಗಣರಾಜ್ಯೋತ್ಸವ ದಿನದಂದು"ಪೌರತ್ವ ತಿದ್ದುಪಡಿ ಕಾಯ್ದೆಯ ಮಹಾ ಅಭಿಯಾನ" {CAA} ದಿನವಾಗಿದ್ದು ಗಣೇಶ ಮಂದಿರ ವಾರ್ಡಿನ ಎಲ್ಲಾ ಕಾರ್ಯಕರ್ತರು, ಮುಖಂಡರುಗಳು, ಸಾರ್ವಜನಿಕರು ಅಭಿಯಾನದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ.
ನಾಳಿನ ಈ ಕಾರ್ಯಕ್ರಮದಲ್ಲಿ ಪ್ರತಿ ಬೂತ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿರವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕಾರ್ಯರೂಪ ಗೊಳಿಸಿದ್ದಕ್ಕಾಗಿ ಧನ್ಯವಾದ ಪತ್ರಗಳನ್ನು ಬರೆದು ಪ್ರಧಾನಮಂತ್ರಿಗಳಿಗೆ ಪೋಸ್ಟ್ ಮುಖಾಂತರ ಕಳಿಸಿ ಕೊಡಬೇಕಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ 88662-88662 ಈ ದೂರವಾಣಿ ಸಂಖ್ಯೆಗೆ ತಮ್ಮ ತಮ್ಮ ಮೊಬೈಲ್ ಸಂಖ್ಯೆಯಿಂದ ಮಿಸ್ ಕಾಲ್ ಕೊಡುವುದರ ಮೂಲಕ ಬೆಂಬಲ ಸೂಚಿಸುವುದು.
ಭಾರತಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದು ಹಾಗೂ ನಮ್ಮ ನಮ್ಮ ಬೂತ್ ಗಳಲ್ಲಿ ಧ್ವಜಾರೋಹಣ ಮಾಡುವುದು.
"ಉಟ್ಟ ಬಟ್ಟೆಯಲ್ಲಿ ಬಿಟ್ಟು ಬಂದವರು" ಪುಸ್ತಕವನ್ನು ಕಾರ್ಯಕ್ರಮದಲ್ಲಿ ಓದುವುದು. {ಈ ಪುಸ್ತಕಗಳು ವೇಣು, ಗಣೇಶ ಮಂದಿರ ವಾರ್ಡ್ನ ಬಿಜೆಪಿ ಅಧ್ಯಕ್ಷರು ಬಳಿ ದೊರೆಯುತ್ತವೆ}
ಗಣೇಶ ಮಂದಿರ ವಾರ್ಡ್ ಬಿಜೆಪಿ ಕಾರ್ಯಕರ್ತರು ಈ ಐತಿಹಾಸಿಕ ಕಾಯ್ದೆಯ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಮಂತ್ರಿಗಳಾದ ಅಮಿತ್ ಶಾ ರವರ ಜೊತೆಗಿದ್ದೇವೆ ಎಂದು ತೋರಿಸೋಣ.
"ದೇಶದ ಹಿತಕಾಯಲು ಸದಾ ಸಿದ್ದ
ದೇಶದ ಸುರಕ್ಷತೆ ಕಾಪಾಡಲು ಕಟ್ಟಿ ಬಂದ
ಪೌರತ್ವ ಕಾಯ್ದೆಗೆ ನಮ್ಮೆಲ್ಲರ ಬೆಂಬಲ
ಒಂದಾಗಿ ಒಟ್ಟಾಗಿ ಕಾರ್ಯಕ್ರಮವನ್ನು
ಯಶಸ್ವಿಗೊಳಿಸೋಣ"
ಇಂತಿ
ನಿಮ್ಮ ಮನೆಯ ಮಗಳು
ಡಿ.ಎಚ್. ಲಕ್ಷ್ಮಿ
ಬಿ.ಬಿ.ಎಂ.ಪಿ ಸದಸ್ಯರು